ವಿಡಿಯೋ ಕಾಲ್ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್: 11.30 ಲಕ್ಷ ರೂ. ಹಣ ವಂಚನೆ
ಉಡುಪಿ, ಮೇ 9: ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿ ಲಕ್ಷಾಂತರ ರೂ. ಹಣ ದೋಚಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತೆಕಟ್ಟೆಯ ಅಸ್ಟರ್(28) ಎಂಬವರಿಗೆ ಡೇಟಿಂಗ್ ಆ್ಯಪ್ನಲ್ಲಿ ಸಾಚಿ ಜೈನ್ ಎಂಬಾಕೆ ಪರಿಚಯವಾಗಿದ್ದು, ಆ ಬಳಿಕ ಆಕೆಯು ವಾಟ್ಸ್ಅಪ್ನಲ್ಲಿ ಅಸ್ಟರ್ ಜೊತೆ ಚಾಟಿಂಗ್ ಮತ್ತು ವಿಡಿಯೋ ಕಾಲ್ ನಡೆಸುತ್ತಿದ್ದರು. ಈ ವಿಡಿಯೋ ಕಾಲ್ ರೆಕಾರ್ಡ್ ಮಾಡಿ, ಅವುಗಳನ್ನು ಅಸ್ಟರ್ಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ದೂರಲಾಗಿದೆ.
ಅದರಂತೆ ಅಸ್ಟರ್ ಆರೋಪಿ ತಿಳಿಸಿದ ಬ್ಯಾಂಕ್ ಖಾತೆ ಹಾಗೂ ಯುಪಿಐ ಐಡಿಗಳಿಗೆ ಹಂತ ಹಂತವಾಗಿ 11,30,106ರೂ. ಹಣವನ್ನು ವರ್ಗಾಯಿಸಿ ದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
Next Story