ಸೌದಿ ಸ್ಮ್ಯಾಶ್ ಟೇಬಲ್ ಟೆನಿಸ್ ಟೂರ್ನಿ: ಕ್ವಾರ್ಟರ್ ಫೈನಲ್ ಗೆ ಮಣಿಕಾ ಬಾತ್ರಾ
ಜೆದ್ದಾ: ಸೌದಿ ಸ್ಮ್ಯಾಶ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ತನ್ನ ಕನಸಿನ ಓಟವನ್ನು ಮುಂದುವರಿಸಿರುವ ಮಣಿಕಾ ಬಾತ್ರಾ ವಿಶ್ವದ ನಂ.14ನೇ ಆಟಗಾರ್ತಿ ನೈನಾ ಮಿಟ್ಟೆಲ್ಹ್ಯಾಮ್ರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಗೆ ತಲುಪಿದ್ದಾರೆ.
ಬುಧವಾರ 22 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಜರ್ಮನಿಯ ಮಿಟ್ಟೆಲ್ಹ್ಯಾಮ್ರನ್ನು 3-0(11-6, 11-9, 11-7)ಅಂತರದಿಂದ ಮಣಿಸಿದರು. ಈ ಮೂಲಕ ಅಂತಿಮ-8ರ ಘಟ್ಟ ತಲುಪಿದರು. ಮಿಟ್ಟೆಲ್ಹ್ಯಾಮ್ ವಿರುದ್ಧ ಆಡಿರುವ 4ನೇ ಪಂದ್ಯದಲ್ಲಿ ಮಣಿಕಾ ಗಳಿಸಿದ ಮೊದಲ ಗೆಲುವು ಇದಾಗಿದೆ.
ಮಣಿಕಾ ಸೆಮಿ ಫೈನಲ್ ನಲ್ಲಿ ಸ್ಥಾನ ಪಡೆಯಲು ಜಪಾ ನ ವಿಶ್ವದ ನಂ.5ನೇ ಆಟಗಾರ್ತಿ ಹಿನಾ ಹಯಾಟಾರನ್ನು ಎದುರಿಸಲಿದ್ದಾರೆ.
ವಿಶ್ವದ ನಂ.3ನೇ ಆಟಗಾರ್ತಿ ಮಣಿಕಾ ಸೋಮವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಚೀನಾದ ವಾಂಗ್ ಮಾನ್ಯುರನ್ನು 3-1 ಅಂತರದಿಂದ ಸೋಲಿಸಿದ್ದರು. ರೊಮಾನಿಯಾದ ಆಂಡ್ರೀಯ ಡ್ರಾಗೊಮನ್ರನ್ನು 3-0 ಅಂತರದಿಂದ ಮಣಿಸುವ ಮೂಲಕ ಮಣಿಕಾ ತನ್ನ ಅಭಿಯಾನ ಆರಂಭಿಸಿದ್ದರು.
Next Story