ಟ್ವೆಂಟಿ20 ವಿಶ್ವಕಪ್ | ಐರ್ ಲ್ಯಾಂಡ್ ತಂಡಕ್ಕೆ ಸ್ಟರ್ಲಿಂಗ್ ನಾಯಕ
ಪಾಲ್ ಸ್ಟರ್ಲಿಂಗ್ |PC : X
ಡಬ್ಲಿನ್: ಅನುಭವಿ ಆರಂಭಿಕ ಆಟಗಾರ ಪಾಲ್ ಸ್ಟರ್ಲಿಂಗ್ ಅವರನ್ನು ಮುಂದಿನ ತಿಂಗಳು ನಡೆಯುವ ಟಿ20 ವಿಶ್ವಕಪ್ಗೆ ಐರ್ ಲ್ಯಾಂಡ್ ಕ್ರಿಕೆಟ್ ತಂಡದ ನಾಯಕರನ್ನಾಗಿ ಬುಧವಾರ ನೇಮಕ ಮಾಡಲಾಗಿದೆ.
ಸ್ಟರ್ಲಿಂಗ್ ಜೊತೆಗೆ ಆ್ಯಂಡ್ರೂ ಬಲ್ಬಿರ್ನಿ ಹಾಗೂ ಜಾರ್ಜ್ ಡಾಕ್ರೆಲ್ ಅವರು ತಂಡದಲ್ಲಿ ಸ್ಥಾನ ಪಡೆದಿರುವ ಅನುಭವಿ ಆಟಗಾರರು. ಐರ್ಲ್ಯಾಂಡ್ ಜೂನ್ 5ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಎ ಗುಂಪಿನ ಪಂದ್ಯದಲ್ಲಿ ಭಾರತ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಪಾಕಿಸ್ತಾನ, ಕೆನಡಾ ಹಾಗೂ ಆತಿಥೇಯ ಅಮೆರಿಕ ಈ ಗುಂಪಿನಲ್ಲಿರುವ ಇತರ ಮೂರು ತಂಡಗಳಾಗಿವೆ.
ಐರ್ಲ್ಯಾಂಡ್ ತಂಡ: ಪಾಲ್ ಸ್ಟರ್ಲಿಂಗ್(ನಾಯಕ), ಮಾರ್ಕ್ ಅಡೈರ್, ರಾಸ್ ಅಡೈರ್, ಆಂಡ್ರೂ ಬಲ್ಬಿರ್ನಿ, ಕರ್ಟಿಸ್ ಕ್ಯಾಂಫರ್, ಗರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ನೀಲ್ ರಾಕ್(ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಲಾರ್ಕನ್ ಟಕರ್(ವಿಕೆಟ್ ಕೀಪರ್), ಬೆನ್ ವೈಟ್ ಹಾಗೂ ಕ್ರೆಗ್ ಯಂಗ್.
Next Story