ಚಿಕಾಗೊ | ಮೇ 2ರಿಂದ ಭಾರತೀಯ ವಿದ್ಯಾರ್ಥಿ ನಾಪತ್ತೆ
ವಾಷಿಂಗ್ಟನ್ : ಚಿಕಾಗೊ ನಗರದಲ್ಲಿ 26 ವರ್ಷದ ಭಾರತೀಯ ವಿದ್ಯಾರ್ಥಿ ಮೇ 2ರಿಂದ ನಾಪತ್ತೆಯಾಗಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಅಮೆರಿಕದಲ್ಲಿನ ಭಾರತದ ರಾಜತಾಂತ್ರಿಕ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಹೈದರಾಬಾದ್ ಮೂಲದ ರೂಪೇಶ್ಚಂದ್ರ ಚಿಂತಕಿಂಡಿ ವಿಸ್ಕಾನ್ಸಿನ್ನ ಕಾನ್ಕಾರ್ಡಿಯಾ ವಿವಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದು ಮೇ 2ರಂದು ಯಾರನ್ನೋ ಭೇಟಿಯಾಗಲು ಟೆಕ್ಸಾಸ್ಗೆ ತೆರಳಿದ್ದು ಆ ಬಳಿಕ ಅವರ ಪತ್ತೆಯಿಲ್ಲ ಎಂದು ರೂಮ್ಮೇಟ್ ಮಾಹಿತಿ ನೀಡಿದ್ದಾನೆ ಎಂದು ಚಿಕಾಗೊ ಪೊಲೀಸರು ಹೇಳಿದ್ದಾರೆ.
ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಚಿಕಾಗೊ ಪೊಲೀಸರು ಪ್ರಯತ್ನ ನಡೆಸುತ್ತಿದ್ದು ಸ್ಥಳೀಯ ಅಧಿಕಾರಿಗಳು ಹಾಗೂ ಭಾರತದಲ್ಲಿರುವ ವಿದ್ಯಾರ್ಥಿಯ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಚಿಕಾಗೋದಲ್ಲಿನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ (ಸಿಜಿಐ) ಹೇಳಿದ್ದಾರೆ.
Next Story