ಎಸೆಸ್ಸೆಲ್ಸಿ ಪರೀಕ್ಷೆ: ಬ್ರೈಟ್ ಮೋಡೆಲ್, ಚೈತನ್ಯ ಪಬ್ಲಿಕ್ ಸ್ಕೂಲ್, ನೂರುಲ್ ಹುದಾ, ಕಣ್ಣೂರು ಪ್ರೌಢಶಾಲೆಗೆ ಶೇ.100 ಫಲಿತಾಂಶ
ಮಂಗಳೂರು: ಪ್ರಸಕ್ತ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುದ್ರೋಳಿಯ ಬ್ರೈಟ್ ಮೋಡೆಲ್ ಸ್ಕೂಲ್ಗೆ ಶೇ.100 ಫಲಿತಾಂಶ ಲಭಿಸಿದೆ.
ವಿದ್ಯಾರ್ಥಿನಿ ಮರಿಯಂ ಸಭಾ 579 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಮತ್ತು ಹನೀಫಾ ಲಿಫ್ಹಾಂ 577 ಅಂಕ ದೊಂದಿಗೆ ದ್ವಿತೀಯ ಹಾಗೂ ಫಾತಿಮಾ ಸಿಮಿನ್ ತೃತೀಯ ಸ್ಥಾನಿಯಾಗಿದ್ದಾರೆ. ಒಟ್ಟು 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಕೃಷ್ಣಾಪುರ ಚೈತನ್ಯ ಪಬ್ಲಿಕ್ ಶಾಲೆಗೆ ಶೇ.100 ಫಲಿತಾಂಶ
ಪ್ರಸಕ್ತ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುರತ್ಕಲ್ ಸಮೀಪದ ಕೃಷ್ಣಾಪುರ ಚೈತನ್ಯ ಪಬ್ಲಿಕ್ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ 33 ವಿದ್ಯಾರ್ಥಿಗಳು ಕೂಡ ತೇರ್ಗಡೆ ಹೊಂದಿದ್ದು, ಈ ಪೈಕಿ 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿಮ 24 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳಾದ ತೋಶಿತ್ 613, ಎಂ. ಅಶ್ಫಾಕ್ 579, ಅಖಿಲೇಶ್ 576, ಗಗ್ನೇಶ್ 573, ಎಸ್. ನಿಮ್ರಿಶಾ 570, ಎ.ಕೆ.ಮುಹಾಝ್ 566 ಅಂಕ ಗಳಿಸಿದ್ದಾರೆ. ಈ ಶಾಲೆಯು 10 ವರ್ಷಗಳಿಂದ ಸತತವಾಗಿ ಶೇ.100 ಫಲಿತಾಂಶವನ್ನು ದಾಖಲಿಸುತ್ತಾ ಬಂದಿದೆ ಎಂದು ಮುಖ್ಯ ಶಿಕ್ಷಕಿ ಶಶಿಕಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನೂರುಲ್ ಹುದಾಗೆ ಶೇ.100 ಫಲಿತಾಂಶ
ಪ್ರಸಕ್ತ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಾಟಿಪಳ್ಳದ ನೂರುಲ್ ಹುದಾ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 37 ವಿದ್ಯಾರ್ಥಿಗಳ ಪೈಕಿ 5 ಮಂದಿ ವಿಶಿಷ್ಟ ಶ್ರೇಣಿ, 22 ಮಂದಿ ಪ್ರಥಮ ದರ್ಜೆ, 9 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಕಣ್ಣೂರು ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ
ಪ್ರಸಕ್ತ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಡ್ಯಾರ್ ಕಣ್ಣೂರಿನ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.
ವಿದ್ಯಾರ್ಥಿನಿ ಅವ್ವಾ ಶಾಝ್ಮಿಯಾ 584 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಉಳಿದಂತೆ 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.